ಗೊಂದಲದ ಗೂಡಾದ ಫಲಿಮಾರು ಗ್ರಾಮಸಭೆ!
ಬೇಕು ಬೇಡಗಳ ಮಧ್ಯೆ ನಡೆದ ಗ್ರಾಮ ಸಭೆಯಲ್ಲಿ ಕೆಲ ಅಧಿಕಾರಿಗಳು ಗೈರು
ಪಲಿಮಾರು ವರದಿ
ಬೆರಳೆಣಿಕೆ ಗ್ರಾಮಸ್ಥರಿದ್ದ ವೇಳೆ ಗ್ರಾಮಸಭೆ ಆರಂಭಿಸಲಾಯಿತಾದರೂ ಕೊರಂ ಇಲ್ಲದೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದಾಗ ಗೊಂದಲ ಮಯ ವಾತಾವರಣ ಸೃಷ್ಟಿಯಾಯಿತಾದರೂ ಅಂತಿಮವಾಗಿ ಒಂದಿಷ್ಟು ಗ್ರಾಮಸ್ಥರು ಸಭೆಗೆ ಆಗಮಿಸಿದ್ದರಿಂದ ಸಭೆ ಮುಂದುವರಿಸಲಾಯಿತು.
ನಂದಿಕೂರು ದೇವರಕಾಡು ಪ್ರದೇಶದಲ್ಲಿ ನಿರ್ಮಾಣವಾಗಿರುವ ಎಂ11ಕಂಪನಿಯಿಂದ ಹೊರ ಸೂಸುವ ದುರ್ನಾತ ಪರಿಸರವೆಲ್ಲಾ ಗಾಳಿಯಲ್ಲಿ ಪಸರಿಸುತ್ತಿದ್ದು, ಈ ಬಗ್ಗೆ ಉತ್ತರಿಸ ಬೇಕಾಗಿದ್ದ ಪರಿಸರ ಇಲಾಖಾ ಅಧಿಕಾರಿಗಳ ಗೈರು ಗ್ರಾಮಸಭೆಯಲ್ಲಿ ಗೊಂದಲಕ್ಕೆ ಕಾರಣವಾದರೂ ಬಳಿಕ ರಾಜಿ ಮಾಡಿಕೊಂಡು ಸಭೆ ಮುಂದುವರಿಸಲಾಯತು.
ವರದಿ ವಾಚಿಸುತ್ತಿದಂತೆ ಕರಣಿಕರ ಕಟ್ಟೆಯಿಂದ ಜಾರಂದಾಯ ದೈವಸ್ಥಾನ ಸಂಪರ್ಕಿಸುವ ಖಾಸಗಿ ರಸ್ತೆ ಅಗಲೀಕರಣಕ್ಕೆ ಖಾಸಗಿಯವರಿಂದ ಯಾವುದೇ ಅನುಮತಿ ಪತ್ರ ಪಡೆಯದೆ ಜನರ ತೆರಿಗೆ ಹಣ 39ಸಾವಿರ ರೂಪಾಯಿ ಬಳಕೆ ಮಾಡಿರುವುದು ಕಾನೂನು ಬಾಹಿರವಾಗಿದೆ, ಅದಲ್ಲದೆ ಯಾವಾಗಲೋ ನಡೆದ ಕಾಮಗಾರಿಯನ್ನು 2023-24ರಲ್ಲಿ ನಡೆದಿರುವುದು ಎಂಬುದಾಗಿ ವರದಿಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂಬುದಾಗಿ ಗ್ರಾಮಸ್ಥ ಸಂದೀಪ್ ಫಲಿಮಾರ್ ಆರೋಪಿಸಿದಾಗ ಗ್ರಾಮಸ್ಥರು ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಆ ಸಂದರ್ಭ ಅಭಿವೃದ್ಧಿ ಅಧಿಕಾರಿ ಬಿ. ಶಶಿಧರ್ ನಿರುತ್ತರರಾದರು. ಆ ಸಂದರ್ಭ ಗ್ರಾ.ಪಂ.ಉಪಾಧ್ಯಕ್ಷರಿಂದ ಅದನ್ನು ಸಮರ್ಥಿಸುವ ಯತ್ನವೂ ನಡೆಯಿತು.
ಕೆಲ ತಿಂಗಳ ಹಿಂದೆ ಕಾಪು ತಹಶೀಲ್ದಾರ್ ಸಮಕ್ಷಮದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನು ಮಾಡಿದ್ದರೂ ಯಾವುದೂ ಕಾರ್ಯಕತವಾಗಿಲ್ಲ ಎಂಬುದಾಗಿ ಆಕ್ಷೇಪ ವ್ಯಕ್ತ ಪಡಿಸಿದ ಮಾಜಿ ತಾ.ಪಂ. ಸದಸ್ಯ ದಿನೇಶ್ ಕೋಟ್ಯಾನ್, ಎಂ11ಕಂಪನಿಯು ಅನದಿಕೃತವಾಗಿ ನಿರ್ಮಿಸಿದ ಪೈಪ್ ಲೈನ್ ಕಾಮಗಾರಿ ತೆರವು ಮಾಡುವ ನಿರ್ಣಯ ಕೈಗೊಂಡಿದ್ದರೂ ಅದನ್ನು ತೆರವು ಮಾಡಿಲ್ಲ, ಬಳಿಕ ಅದನ್ನು ತೆರವುಗೊಳಿಸಲಾಯಿತಾದರೂಕಂಪನಿಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದೇವೆ ಎಂಬ ಒಂದೇ ಕಾರಣಕ್ಕೆ ನಮ್ಮ ಕೆಲವರ ವಿರುದ್ಧ ಕೇಸು ದಾಖಲು ಮಾಡಿಸಿದೆ, ಈ ತೆರವು ಕಾರ್ಯದ ನೈಜ್ಯ ವಿಚಾರವನ್ನು ಗ್ರಾ.ಪಂ. ಬಿಚ್ಚಿಟ್ಟಿದ್ದೇ ಆದಲ್ಲಿ ನಮ್ಮ ಮೇಲೆ ಮಾಡಲಾದ ಸುಳ್ಳು ಕೇಸು ಬಿದ್ದು ಹೋಗಲಿದ್ದು ಈ ಬಗ್ಗೆ ಗ್ರಾ.ಪಂ. ಸ್ಪಂಧಿಸುವಂತೆ ಒತ್ತಾಯಿಸಿದರು.
ಇದಕ್ಕುತ್ತರಿಸಿದ ಅಧ್ಯಕ್ಷರು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿವ ಭರವಸೆ ವ್ಯಕ್ತ ಪಡಿಸಿದ್ದಾರೆ.
ಕೈಗಾರೀಕ ಪ್ರದೇಶದಲ್ಲಿ ದಾರಿ ದೀಪಗಳಿದ್ದರೂ ಅದು ಉರಿಯುತ್ತಿಲ್ಲ, ರಾತ್ರಿ ಹೊತ್ತು ಹೊರ ರಾಜ್ಯದ ಯುವಕರು ಅಡ್ಡಾಡುತ್ತಾ ಮಾದಕ ದೃವ್ಯಗಳ ವ್ಯಸನಿಗಳಾಗುತ್ತಿದ್ದು, ಸ್ಥಳೀಯವಾಗಿ ವಾಸದ ಮನೆಗಳಿರುವುದರಿಂದ ಅವರು ಬೇರೆ ಬೇರೆ ರೀತಿಯ ಆತಂಕ ಎದುರಿಸುವಂತ್ತಾಗಿದೆ. ಅಲ್ಲದೆ ಸ್ಥಳೀಯ ಗೋಣಿಚೀಲ ತಯಾರಿಕಾ ಕಂಪನಿ ಶ್ರೀಚಕ್ರ ಸ್ಥಳೀಯ ಕೆಲಸಗಾರರನ್ನು ಕಡೆಗಣಿಸುತ್ತಿದ್ದು, ಅವರನ್ನು ಕೆಲಸದಿಂದ ಕಿತ್ತಾಕುತ್ತಿದ್ದಾರೆ ಎಂಬುದಾಗಿ
ಪೊಲೀಸ್ ಇಲಾಖೆಯ ಅನುಪಸ್ಥಿತಿಯಲ್ಲಿ ಸಭೆಯಲ್ಲಿ ಗ್ರಾಮಸ್ಥ ಅಶ್ವಿನ್ ದೂರಿದ್ದಾರೆ.
ಅಂತಿಮವಾಗಿ ಆರೋಗ್ಯಕ್ಕೆ ಹಾನಿಕಾರಕ ದುರ್ನಾತ ಹೊರ ಸೂಸುವ ಎಂ 11 ತಕ್ಷಣವೇ ಸಮಸ್ಯೆ ರಹಿತವಾಗಿ ಕಾರ್ಯಚರಿಸ ಬೇಕು ಇಲ್ಲವೇ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದಂತೆ ಗ್ರಾ.ಪಂ. ನಿರ್ಣಯ ಕೈಗೊಂಡಿದೆ.
ಸಭಾಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಸೌಮ್ಯಾಲತ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ್ ಪೈ, ಅಭಿವೃದ್ಧಿ ಅಧಿಕಾರಿ ಬಿ. ಶಶಿಧರ್, ನೋಡಲ್ ಅಧಿಕಾರಿ ರಾಮಕೃಷ್ಣ ಭಟ್, ಗ್ರಾಮಸ್ಥರಾದ ಯಶವಂತ್, ಪ್ರತೀಕ್ ಕೋಟ್ಯಾನ್, ಲಕ್ಷ್ಮಣ್ ಶೆಟ್ಟಿ, ನಾಗರಾಜ್ ಭಟ್, ಕೃಷ್ಣ ಬಂಗೇರ, ಗಿರಿಯಪ್ಪ ಪೂಜಾರಿ, ಕುಂಪ್ಲಿ ಸುರೇಶ್, ಮಾಲತಿ ದಿವಾಕರ್ ಸಹಿತ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಗ್ರಾಮಸ್ಥರನೇಕರು ಪಾಲ್ಗೊಂಡಿದ್ದರು.