ಕನ್ನಂಗಾರು ಉರೂಸ್ ಸಮಾರಂಭಕ್ಕೆ ಅನುದಾನ ಕೋರಿ ಮುಖ್ಯಮಂತ್ರಿಗೆ ಮನವಿ
ಉರೂಸ್ ಸಮಿತಿ ಅಧ್ಯಕ್ಷ ಗುಲಾಂ ಮೊಹಮ್ಮದ್ ನೇತ್ರತ್ವದಲ್ಲಿ ಮನವಿ
ಬೆಳಗಾವಿ ವರದಿ
ಕನ್ನಂಗಾರು ಶೈಖುನಾ ಸಿರಾಜುದ್ಧೀನ್ ವಲಿಯುಲ್ಲಾಹಿ(ಖ.ಸಿ) ದರ್ಗಾ ಶರೀಫ್ ನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಕನ್ನಂಗಾರು ಉರೂಸ್ ಸಮಾರಂಭಕ್ಕೆ ಅನುದಾನ ಕೋರಿ, ಬೆಳಗಾವಿ ಸುವರ್ಣ ಸೌಧದಲ್ಲಿ ಶಾಸಕ ಐವನ್ ಡಿಸೋಜ ಮೂಲಕ ಉರೂಸ್ ಸಮಿತಿ ಅಧ್ಯಕ್ಷ ಗುಲಾಂ ಮೊಹಮ್ಮದ್ ತಂಡ ಮನವಿಯನ್ನು ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮುಸ್ಲಿಂ ಬಾಹುಳ್ಯವಿರುವ ಅಮಾಅತ್ ಇದಾಗಿದ್ದು, ಸುಮಾರು 1100ಕ್ಕೂ ಅಧಿಕ ಮನೆಗಳಿದ್ದು, ಈ ಧಾರ್ಮಿಕ ಸಮಾರಂಭಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮುಸ್ಲಿಂ ಸಮೂದಾಯ ಮಾತ್ರವಲ್ಲದೆ ಹಿಂದೂ ಕ್ರಿಶ್ಚಿಯನ್ ಬಾಂಧವರು ಪಾಲ್ಗೊಳ್ಳುತ್ತಾರೆ, ಇದೊಂದು ಈ ಭಾಗದ ಸೌಹಾರ್ದತೆಯ ಹಾಗೂ ಪ್ರವಾಸಿ ತಾಣ ಆಗಿದೆ, ಜಾತ-ಮತ ಭೇದವಿಲ್ಲದೆ ನಡೆಯುವ ಈ ಸಮಾರಂಭಕ್ಕೆ ಎರಡು ಕೋಟಿ ರೂಪಾಯಿಗೂ ಅಧಿಕ ಖರ್ಚು ಆಗಲಿದ್ದು, ಸರ್ಕಾರದ ಅನುದಾನವನ್ನು ಈ ಧಾರ್ಮಿಕ ಕಾರ್ಯಕ್ಕೆ ಸರ್ಕಾರದ ಅನುದಾನ ನೀಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿ ನೀಡಲು ಬೆಳಗಾವಿ ಸುವರ್ಣ ಸೌದಕ್ಕೆ ಗುಲಾಂ ಮೊಹಮ್ಮದ್ ತಂಡದಲ್ಲಿ ಮಸೀದಿ ಸಮಿತಿಯ ಪ್ರಮುಖರಾದ ಟಿ.ಎಂ.ಬಾವ, ಕಭೀರ್, ಇಬ್ರಾಹಿಂ, ಅಬುಬಕ್ಕರ್ ಮುಂತಾದವರಿದ್ದರು.