ಎರ್ಮಾಳು ಲಕ್ಷ್ಮೀ ಜನಾರ್ದನ ದೇವಳದಲ್ಲಿ ಅದ್ಧೂರಿ ಬಿಲ್ಲವ ಬಲಿ ಸೇವೆ
ಪಡುಬಿದ್ರಿ ವರದಿ
ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಬಾವಿಯಾಗಿ ಪ್ರತೀ ವರ್ಷ ದಂತೆ ಬಿಲ್ಲವ ಸಮಾಜದ ವತಿಯಿಂದ ನಡೆಯುವ “ಬಿಲ್ಲವ ಬಲಿ ಸೇವೆ” ಬಹಳ ವಿಜ್ರಂಬಣೆಯಿಂದ ನಡೆಯಿತು.
ವಾರ್ಷಿಕ ಜಾತ್ರೆಯ ಪೂರ್ವಬಾವಿಯಾಗಿ ಬಹುತೇಕ ಸಮಾಜಗಳಿಗೆ ನಿಗದಿಯಾದ ದಿನದಂದ್ದು ಬಲಿ ಸೇವೆ ನಡೆಯುವುದು ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿ. ಈ ದಿನ ನಡೆದ ಬಿಲ್ಲವ ಬಲಿ ಸೇವೆಯ ಪ್ರತೀ ಸುತ್ತುಗಳಲ್ಲೂ ಬೇರೆ ಬೇರೆ ವಾದ್ಯ ಘೋಷಗಳಿಗಳಿದ್ದವು, ಮಹಿಳಾ ಭಜನಾ ತಂಡವು ಈ ಬಾರಿಯ ಬಲಿ ಸೇವೆಯ ಮೆರುಗನ್ನು ಹೆಚ್ಚಿಸಿದೆ. ತೆಂಕ, ಬಡ, ಉಚ್ಚಿಲ ಭಾಗದ ನೂರಾರು ಬಿಲ್ಲವ ಸಹಿತ ಇತರೆ ಸಮಾಜದ ಭಕ್ತಾಧಿಗಳು ಶ್ರೀದೇವರ ಬಲಿ ಸೇವೆಯಲ್ಲಿ ಪಾಲ್ಗೊಂಡಿದ್ದರು.
ವಿವಿಧ ಬಗೆಯ ಸುಡುಮದ್ದುಗಳು ಆಕರ್ಷಿಣಿಯಾವಾಗಿತ್ತು, ಬಲಿ ಸೇವೆಯ ಬಳಿಕ ದೇವರಿಗೆ ಪ್ರಿಯವಾದ ನಡೆದ ರಂಗಪೂಜೆ ನಡೆಯುವ ಮೂಲಕ ಈ ವರ್ಷದ ಬಿಲ್ಲವ ಬಲಿ ಸೇವೆ ಸಮಾಸ್ತಿಗೊಂಡಿದೆ.
ಈ ಸಂದರ್ಭ ದೇವಳದ ಆಢಳಿತ ಮೊಕ್ತೇಸರ ಅಶೋಕ್ ರಾಜ್ ಬೀಡು, ಕುದ್ರೋಟ್ಟು ಗರೋಡಿಯ ಅರ್ಚಕ ಸದಾನಂದ ನಾಯಗ, ಬಲಿಸೇವಾ ಸಮಿತಿಯ ಅಧ್ಯಕ್ಷ ವೈ.ಓಮಯ್ಯ ಪೂಜಾರಿ, ಕಾರ್ಯದರ್ಶಿ ಸುರೇಶ್ ಎರ್ಮಾಳು, ಗ್ರಾಮದ ಪ್ರಮುರಾದ ಶಂಕರ್ ಪೂಜಾರಿ, ರತ್ನಾಕರ್ ಕೋಟ್ಯಾನ್, ಸತೀಶ್ ಪೂಜಾರಿ, ರಮೇಶ್ ಅಂಚನ್ ಮುಂತಾದವರಿದ್ದರು.