ಉಚ್ಚಿಲ: ಬಸ್ಸಿನಡಿಗೆ ಬಿದ್ದು ವ್ಯಕ್ತಿ ಮೃತ್ಯು
ಪಡುಬಿದ್ರಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಬಸ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಬಸ್ಸಿನಡಿಗೆ ಬಿದ್ದು ದಾರುಣಾವಾಗಿ ಮೃತಪಟ್ಟ ಘಟನೆ ಕಾಪು ಸಮೀಪದ ಉಚ್ಚಿಲ ಪೇಟೆಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿ ಉಚ್ಚಿಲ ಬಡ ಗ್ರಾಮ ನಿವಾಸಿ ಶಿವಪ್ಪ ಬೆಳ್ಚಡ, ಇವರು ಉಚ್ಚಿಲ ರಾಧಾ ಹೋಟೆಲ್ ಮುಂಭಾಗ ಹೆದ್ದಾರಿ ದಾಟುತ್ತಿದ್ದ ವೇಳೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಮುನ್ನುಗ್ಗಿ ಬಂದ ಸರ್ಕಾರಿ ಬಸ್ ಡಿಕ್ಕಿಯಾಗಿ, ವ್ಯಕ್ತಿ ಬಸ್ಸಿನಡಿಗೆ ಬಿದ್ದರೂ ಮತ್ತೊ ಮುಂದೊಗಿ ಬಸ್ ನಿಂತಿದೆ.
ಮಾನವೀಯತೆ ಮೆರೆದ ಮುಸ್ಲಿಂ ಯುವಕರು:
ಬಸ್ ಡಿಕ್ಕಿಯಾಗಿ ವಯೋವೃದ್ಧ ಪಾದಚಾರಿ ಬಸ್ಸಿನಡಿಯಲ್ಲಿ ಸಿಲುಕಿದ್ದು, ಯಾರು ಏನು ಎಂಬದನ್ನು ಗಮನಿಸದೆ ಕೇವಲ ಮನುಷ್ಯ ಎಂಬ ನೆಲೆಯಲ್ಲಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರ ತಂಡ ಬಸ್ಸಿನಡೆಗೆ ತೆವಲಿಕೊಂಡು ಹೋಗಿ ಗಾಯಾಳುವನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರೂ ಅಷ್ಟರಲ್ಲೇ ಅವರು ಮೃತರಾಗಿದ್ದರು. ಆದರೆ ಆ ಯುವಕರ ತಂಡದ ಕಾರ್ಯಕ್ಕೆ ಎಲ್ಲೆಡೆ ಪ್ರಶಂಶೆ ವ್ಯಕ್ತವಾಗಿದೆ. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.