ಈಡಿಗ ಬಿಲ್ಲವ ನಾಮಧಾರಿ ದೀವರ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಶ್ರೀ ಗಳ ನೇತ್ರತ್ವದಲ್ಲಿ ಪ್ರತಿಭಟನೆ
ಬೆಳಗಾವಿ ಸುವರ್ಣಸೌಧ ಎದುರು ಪರಮಪೂಜ್ಯ ಡಾ. ಶ್ರೀ ಪ್ರಣವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಅಧ್ಯಕ್ಷ ಕನ್ನಡ ರತ್ನ ಡಾ. ಮಂಚೇಗೌಡ ಬಿ ಹೆಚ್
ರವರ ಅಧ್ಯಕ್ಷತೆಯಲ್ಲಿ ರಾಜ್ಯ ಜಿಲ್ಲಾ ತಾಲೂಕು ಪ್ರಮುಖರು
ಈಡಿಗ ಬಿಲ್ಲವ ನಾಮಧಾರಿ ದೀವರ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲಾಯಿತು.
ಉನ್ನತ ಶಿಕ್ಷಣ ಸಚಿವರಾದ
ಶರಣಪ್ರಕಾಶ್ ಪಾಟೀಲ್ ರವರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ, ಸ್ವಾಮೀಜಿಗಳ ಜೊತೆ ಸಾಕಷ್ಟು ಸಮಯ ವಿಷಯ ಚರ್ಚಿಸಿ ಬೇಡಿಕೆಗಳನ್ನು
ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಡೇರಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಶ್ರೀಗಳಿಗೆ ಭರವಸೆ ನೀಡಿದರು.
ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ಶ್ರೀಗಳು ತಾವು ವಿರೋಧ ಪಕ್ಷದಲ್ಲಿದ್ದಾಗ ನಮ್ಮ ಸಮಾಜದ ಹೋರಾಟಗಳಲ್ಲಿ ಅನೇಕ ಸಮಯ ಭಾಗವಹಿಸಿದ್ದೀರಿ ಸಚಿವರಾದ ಮೇಲೆ ತಾವು ಒಂದು ನಿಯೋಗವನ್ನು ತೆಗೆದುಕೊಂಡ ಹೋಗಿಲ್ಲ ಎಂದು ನೋವು
ನಮ್ಮ ಸಮಾಜಕ್ಕೆ ಇದೆ ಎಂದು ವಿಷಾದ ವ್ಯಕ್ತ ಪಡಿಸಿದಾಗ,
ಈ ಕೂಡಲೇ ನಾನು ತಮ್ಮ ಕಲ್ಯಾಣ ಕರ್ನಾಟಕದ ಸಮುದಾಯದ ಮುಖಂಡರನ್ನು ಒಳಗೊಂಡು ತಮಗೂ ತಿಳಿಸಿ ಮುಖ್ಯಮಂತ್ರಿಯ ಹತ್ತಿರ ನಿಯೋಗವನ್ನು ತೆಗೆದುಕೊಂಡು ಹೋಗುವ ಸಂಪೂರ್ಣ ವ್ಯವಸ್ಥೆ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಈ ಹೋರಾಟದಲ್ಲಿ
ಚಿತ್ರದುರ್ಗ ಗದಗ್ ಹಾವೇರಿ, ದಾವಣಗೆರೆ ಮಂಗಳೂರು ಉಡುಪಿ ಕಾರವಾರ್ ವಿಜಯನಗರ ಬೆಂಗಳೂರು ಜಿಲ್ಲೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.