ಇಸ್ಲಾಂ ರಾಷ್ಟ್ರದಲ್ಲಿ ಇಲ್ಲದ ವಕ್ಫ್ ಸಂಸ್ಥೆ ಇಲ್ಲಿ ಯಾಕೆ? ಸುರೇಶ್ ಶೆಟ್ಟಿ ಗುರ್ಮೆ ಪ್ರಶ್ನೆ
ಇಸ್ಲಾಂ ರಾಷ್ಟದಲ್ಲಿ ಎಲ್ಲೂ ಇಲ್ಲದ ವಕ್ಫ್ ಬೋರ್ಡ್ ಸಂಸ್ಥೆ ಇಲ್ಲಿ ಯಾಕಿದೆ..ಜ್ಹಮೀರ್ ಅಹಮ್ಮದ್ ವಿರುದ್ಧ ಅವರದ್ದೇ ಪಕ್ಷದ ಇಪ್ಪತ್ತಮೂರು ಮಂದಿ ಶಾಸಕರು ಹೈಕಮಾಂಡಿಗೆ ದೂರನ್ನು ನೀಡುತ್ತಾರೆ..ಜ್ಹಮೀರ್ ಅನಗತ್ಯ ಅಧಿಕ ಪ್ರಸಂಗತನ ಮಾಡುತ್ತಿದ್ದಾರೆ ತಕ್ಷಣವೇ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬುದಾಗಿ ಸ್ವಪಕ್ಷಿಗರೇ ದೂರು ನೀಡುತ್ತಾರೆ ಎಂದಾದರೆ ಈ ಪಕ್ಷ ಯಾವ ಸಿದ್ದಾಂತ ಮೇಲೆ ನಿಂತಿದೆ ಎಂಬುದು ಅರ್ಥವಾಗುತ್ತದೆ. ತಕ್ಷಣವೇ ಜ್ಹಮೀರ್ ಅಹಮ್ಮದ್ ರವರನ್ನು ಸಂಪುಟದಿಂದ ಕೈ ಬಿಡ ಬೇಕು ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಅವರು ಕಾಪು ಬಿಜೆಪಿ ವತಿಯಿಂದ ಕಾಪು ಪೇಟೆಯಲ್ಲಿ ವಕ್ಫ್ ಸಂಸ್ಥೆಯ ವಿರುದ್ಧ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಆ ಬಳಿಕ ಸೇರಿದ ನೂರಾರು ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಹಿತ ಜ್ಹಮೀರ್ ಅಹಮ್ಮದ್ ವಿರುದ್ಧ ಘೋಷನೆಗಳನ್ನು ಕೂಗುತ್ತಾ ಸಾಗಿ ಕಾಪು ತಾಲೂಕು ಕಛೇರಿಗೆ ತೆರಳಿ ತಾಲೂಕು ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿದರು.
ತಾಲೂಕು ಕಛೇರಿಯಲ್ಲಿ ತೆರೆಯಲಿದೆ ಕೌಂಟರ್:
ಕಾಪು ವ್ಯಾಪ್ತಿಯ ಎಲ್ಲಾ ಜನರಿಗೂ ಆತಂಕವಿದೆ, ನಮ್ಮ ಆಸ್ತಿಯೂ ವಕ್ಫ್ ಸಂಸ್ಥೆಯ ಪಾಲಾಗಿಯೋ ಎಂಬುದು, ಆ ಕಾರಣಕ್ಕಾಗಿ ನಾಳೆಯಿಂದ ಕಾಪು ವ್ಯಾಪ್ತಿಯ ಜನರ ಆಸ್ತಿಯ ಬಗ್ಗೆ ಪರಿಶೀಲನೆಗಾಗಿ ಹೆಚ್ಚುವರಿ ಕೌಂಟರ್ ತೆರೆಯುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡುದ್ದಾರೆ.
ಬಿಜೆಪಿ ಪ್ರಮುಖರಾದ ಜೀತೇಂದ್ರ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶರಣ್ ಕುಮಾರ್ ಮಟ್ಟು, ಮಿಥುನ್ ಹೆಗ್ಡೆ, ಶಿವ ಪ್ರಸಾದ್ ಶೆಟ್ಟಿ ಎಲ್ಲದಡಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ನೀತಾ ಗುರುರಾಜ್, ರೇಷ್ಮಾ ಉದಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಪಾದೂರು, ಶ್ರೀಕಾಂತ್ ನಾಯಕ್, ಶ್ಯಾಮಾಲ ಕುಂದರ್, ನವೀನ್ ಎಸ್.ಕೆ., ಸುಧಾಮ ಶೆಟ್ಟಿ, ಗೋಪಾಲಕೃಷ್ಣ ರಾವ್, ;ಸುಭಾಸ್ ಬಲ್ಲಾಳ್ ಮುಂತಾದವರಿದ್ದರು.