ಇನ್ಸೊಲೇಟರ್ ಮೀನಿನ ವಾಹನದಿಂದ ನಗದು ಕಳವು
ನಿರ್ವಾಹಕರೇ ಕಳ್ಳರಾದರೇ..?
ಕಟಪಾಡಿ ವರದಿ
ಕುಂದಾಪುರದ ಎಂಕೋಡಿಯ ಆಸ್ಮಾ ಎಂಬವರ ಮಾಲಕತ್ವದ ಇನ್ಸೊಲೇಟರ್ ಮೀನಿನ ವಾಹನದಲ್ಲಿದ್ದ ಲಕ್ಷಾಂತರ ರೂ ನಗದು ಕಳವಾಗಿದ್ದು, ಈ ಕೃತ್ಯ ಈ ವಾಹನದಲ್ಲಿ ಕರ್ತವ್ಯದಲ್ಲಿದ್ದ ನಿರ್ವಾಹಕರೇ ಕಳ್ಳರಾದರೆ ಎಂಬ ಸಂಶಯ ವ್ಯಕ್ತವಾಗಿದೆ.
ಕುಂದಾಪುರ ಮೂಲದ ಈ ಮೀನಿನ ವಾಹನದಲ್ಲಿ ಚಾಲಕರಾಗಿ ಅಬ್ದುಲ್ ಸತ್ತರ್ ಕಾರ್ಯನಿವಾಹಿಸುತ್ತಿದ್ದು, ನಿರ್ವಾಹಕರಾಗಿ ಮಹಮ್ಮದ್ ಅದ್ನಾನ್ ಹಾಗೂ ಆತನ ಗೆಳೆಯ ನಿಶಾದ್ ಎಂಬವರು ಕರ್ತವ್ಯದಲ್ಲಿದ್ದರು. ಕಳೆದ ಹತ್ತನೇ ತಾರೀಖಿನಂದ್ದು ಮುಂಜಾನೆ ನಾಲ್ಕು ಗಂಟೆಗೆ ನಿದ್ರೆ ಬರುತ್ತಿದ್ದರಿಂದ ವಾಹನವನ್ನು ಕಟಪಾಡಿಯ ಹೆದ್ದಾರಿ ಇಕ್ಕೆಲಲ್ಲಿ ನಿಲ್ಲಿಸಿ ಮೂವರೂ ವಾಹನದಲ್ಲಿ ಮಲಗಿದ್ದಾರೆ, ಎರಡು ಗಂಟೆ ಕಳೆದು ಚಾಲಕ ಎಚ್ಚರಗೊಂಡು ನಿರ್ವಾಹಕರಿಬ್ಬರು ನಾಪತ್ತೆಯಾಗಿದ್ದು, ವಾಹನದಲ್ಲಿದ್ದ ನಾಲ್ಕು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ ಕೂಡಾ ಕಳವಾಗಿದ್ದು, ಈ ಬಗ್ಗೆ ಕಾಪು ಠಾಣೆಗೆ ವಾಹನ ಮಾಲಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.