ಆಟದ ಮೈದಾನಕ್ಕೆ ಸಮಸ್ಯೆಯಾದರೆ ಹೋರಾಟ ಅನಿವಾರ್ಯ: ಶರತ್ ಶೆಟ್ಟಿ
ಪಡುಬಿದ್ರಿ ಬೋರ್ಡ್ ಶಾಲಾ ಮೈದಾನ ವಿವಾದ
ಪಡುಬಿದ್ರಿ ವರದಿ
ಪಡುಬಿದ್ರಿಯ ಬೋರ್ಡ್ ಶಾಲಾ ಯಾವುದೇ ಕಾಮಗಾರಿಯಿಂದ ಆಟದ ಮೈದಾನಕ್ಕೆ ತೊಂದರೆಯಾದರೆ, ಯುವ ಜನತೆಯ ಪರವಾಗಿ ಮೈದಾನವನ್ನು ಆಟೋಟಕ್ಕೆ ಉಳಿಸುವ ನಿಟ್ಟಿನಲ್ಲಿ ಯಾವುದೇ ಮಟ್ಟದ ಹೋರಾಟಕ್ಕೂ ಸಿದ್ಧ ಎಂಬುದಾಗಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಗೌರವ ಅಧ್ಯಕ್ಷ ಶರತ್ ಶೆಟ್ಟಿ ಎಚ್ಚರಿಸಿದ್ದಾರೆ.
ಡ್ರೈನೇಜ್ ನಿರ್ಮಾಣದ ಹೆಸರಲ್ಲಿ ಅದನ್ನು ಎತ್ತರಿಸಿ ಮೈದಾನವನ್ನು ಆಟೋಟಕ್ಕೆ ಬಳಕೆಯಾಗದ ರೀತಿಯಲ್ಲಿ ಮಾಡುವ ಹುನ್ನಾರ ನಡೆಯುತ್ತಿರುವುದು ಖೇಧಕರ ಸಂಗತಿ, ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಕೈಕ ಮೈದಾನ ಇದ್ದಾಗಿದ್ದು, ಪಡುಬಿದ್ರಿ ಇತಿಹಾಸವನ್ನು ದೇಶವಿದೇಶಗಳಲ್ಲಿ ಪರಿಚಯಿಸಿದ ಮೈದಾನ ಇದಾಗಿದೆ, ಈ ಭಾಗದ ಯಾವುದೇ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಇದೇ ಮೈದಾನ ಆಶ್ರಯ, ಅದಲ್ಲದೆ ಸ್ಥಳೀಯ ವಲಯ ಸಹಿತ ರಾಜ್ಯ, ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಕೂಟಗಳು ನಡೆದ ಹಿರಿಮೆ ಈ ಮೈದಾನದ್ದು, ಇದೀಗ ಮೈದಾನಕ್ಕೆ ಅಂಟಿಕೊಂಡಿರುವ ಚರಂಡಿ ಕಾಮಗಾರಿಗೆ ಮುಂದಾಗಿದ್ದು, ನೆಲ ಮಟ್ಟದಲ್ಲಿ ಕಾಮಗಾರಿ ನಡೆಸಿದರೆ ಆಕ್ಷೇಪವಿಲ್ಲ ಅದು ಬಿಟ್ಟು ಕ್ರೀಡಾಳುಗಳಿಗೆ ಸಮಸ್ಯೆಯಾಗುವ ರೀತಿಯಲ್ಲಿ ನೆಲಮಟ್ಟಕ್ಕಿಂತ ಎತ್ತರಿಸಿ ಕಾಮಗಾರಿ ನಡೆಸಿದರೆ ನಮ್ಮ ವಿರೋಧವಿದೆ. ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ಉತ್ತಮ ನಿರ್ಣಯ ಕೈಗೊಳ್ಳಲು ವಿಫಲವಾದಲ್ಲಿ ಹೋರಾಟ ಅನಿವಾರ್ಯ ವಾದೀತು, ಆ ಕಾರಣದಿಂದ ಸಾರ್ವಜನಿಕರಿಗೆ ಉಪಯೋಗ ಆಗುವ ರೀತಿಯಲ್ಲಿ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಮನವಿಯೊಂದನ್ನು ಕಾಲೇಜು ಪ್ರಾಂಶುಪಾಲರಿಗೆ ಹತ್ತಾರು ಮಂದಿಯ ತಂಡ ಕಾಲೇಜಿಗೆ ತೆರಳಿ ನೀಡಿದ್ದಾರೆ.
ನನ್ನ ಗಮನಕ್ಕಿಲ್ಲ…
ಈ ಕಾಮಗಾರಿ ನಡೆಯುವ ವಿಚಾರ ನನ್ನ ಗಮನಕ್ಕಿಲ್ಲ, ಸಮಸ್ಯೆ ಆಗುವುದು ಹೌದಾದರೆ ಈ ವಿಚಾರ ಶಾಸಕರ ಗಮನಕ್ಕೆ ತಂದು ಸಮಸ್ಯೆ ಇತ್ಯಾರ್ಥಕ್ಕೆ ಪ್ರಯತ್ನಿಸುವುದಾಗಿ ಪ್ರಾಂಶುಪಾಲ ಅಜಯ್ ಹೇಳಿದ್ದಾರೆ.
ಈ ಸಂದರ್ಭ ಸ್ಥಳೀಯ ಪ್ರಮುಖರಾದ ಪ್ತಕಾಶ್ ಶೆಟ್ಟಿ ಪಾದೆಬೆಟ್ಟು, ಸುಭಾಷ್ ಕಾಮತ್, ಹರೀಶ್ ಹೆಜಮಾಡಿ, ಪ್ರಸಾದ್, ವಿನ್ಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ರವಿ ಕಲ್ಲಟ್ಟೆ. ಶಂಕರ್ ಕಂಚಿನಡ್ಕ, ಪ್ರಕಾಶ್ ಆಚಾರ್ಯ, ಸುನೀಲ್ ಪಾದೆಬೆಟ್ಟು, ವರುಣ್, ಅಪ್ಪು ಪಡುಬಿದ್ರಿ, ಅನ್ನಿ, ಸುಬ್ರಹ್ಮಣ್ಯ ಕಲ್ಲಟ್ಟೆ ಮೊದಲಾದವರಿದ್ದರು.