ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿಯ ಕಾಲಿನ ಮೂಳೆ ಮುರಿತ
ಪಡುಬಿದ್ರಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಕಾಲಿನ ಮೂಳೆರಿತವಾದ ಘಟನೆ ಬಡ ಎರ್ಮಾಳು ಪಿಷರೀಸ್ ರಸ್ತೆ ಬಳಿ ಸಂಭವಿಸಿದೆ.
ಮೂಳೆ ಮುರಿತ ಉಂಟಾದವರು ಅದಮಾರು ನಿವಾಸಿ ಜಯ ದೇವಾಡಿಗ (62) , ಇವರು ಕೋಳಿ ಮಾಂಸ ತರಲೆಂದು ತನ್ನ ಸ್ಕೂಟರನ್ನು ರಸ್ತೆಯ ಮೂಡು ಬದಿಯಲ್ಲಿ ನಿಲ್ಲಿಸಿ ಪಕ್ಕದ ಕೋಳಿಯಂಗಡಿಯಲ್ಲಿ ಮಾಂಸ ಕರೀದಿಸಿ, ಮರಳಿ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ, ವ್ಯಕ್ತಿಯ ಕಾಲಿನ ಮೂಳೆ ಮುರಿತವಾದರೆ, ಅವರ ಕೈಯಲ್ಲಿದ್ದ ಕೋಳಿ ಮಾಂಸ ಹೆದ್ದಾರಿ ಎಲ್ಲೇಡೆ ಚೆಲ್ಲಿದೆ. ಗಾಯಾಳು ಆಂಬುಲೆನ್ಸ್ ಗಾಗಿ ಸುಮಾರು 45ನಿಮಿಷ ಹೆದ್ದಾರಿಯಲ್ಲೇ ಕಾಯುವಂತ್ತಾಗಿದ್ದು ಮಾತ್ರ ದುರ್ಧೈವವೇ ಸರಿ.
ಹೆದ್ದಾರಿ ದುರವಸ್ಥೆ ಅಪಘಾತಕ್ಕೆ ಕಾರಣ
ಏಕಾಏಕಿ ಸಂಜೆಯ ಹೊತ್ತು ಹೆದ್ದಾರಿಯನ್ನು ಯಾವುದೇ ಸೂಚನೆ ಸಹಿತ, ಬ್ಯಾರೀಕೇಡ್ ಗಳನ್ನು ಅಳವಡಿಸದೆ ಒಂದು ಪಾಶ್ವವನ್ನು ಮುಚ್ವಿದರಿಂದ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ಸಂಚರಿಸುವಂತ್ತಾಗಿದ್ದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗಿದ್ದು, ಡಿಕ್ಕಿಮಾಡಿ ಪರಾರಿಯಾದ ವಾಹನ ಪತ್ತೆಗೆ ಪೊಲೀಸರು ಸಿಸಿ ಕ್ಯಾಮರಾಗಳ ಮೊರೆ ಹೋಗಿದ್ದಾರೆ.