ಅಪಘಾತಕ್ಕೀಢಾದ ಕುಟುಂಬ ಸದಸ್ಯರಿಗೆ ಸರ್ಕಾರದ ಅನುದಾನ ವಿತರಣೆ
ಮಂಗಳೂರು ವರದಿ
ಇತ್ತೀಚಿಗೆ ಮೀನುಗಾರಿಕೆ ಮಾಡುತ್ತಿರುವ ಸಂದರ್ಭದಲ್ಲಿ ಅಪಘಾತಕ್ಕಿಢಾಗಿ ಸಾವನ್ನಪ್ಪಿದ ಅಸ್ಫಾನ್ ರವರಿಗೆ ಸರ್ಕಾರದಿಂದ ರೂ. 8.00 ಲಕ್ಷ ರೂಪಾಯಿ ಧನಸಹಾಯವನ್ನು ಮೃತರ ಮನೆಗೆ ವಿಧಾನ ಪರಿಷತ್ತಿನ ಶಾಸಕ ಐವನ್ ಡಿ ಸೋಜಾ ತೆರಳಿ ಚೆಕ್ ನ್ನು ವಿತರಿಸಿದರು.
ಈಸಂದರ್ಭದಲ್ಲಿಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ದಿಲೀಪ್ ಕುಮಾರ್, ಸಿದ್ದಯ್ಯ.ಡಿ, ಬೆಂಗ್ರೆ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಅಶ್ರಫ್ ಬೆಂಗ್ರೆ, ಬೆಂಗ್ರೆ ಯುವ ಕಾಂಗ್ರೆಸ್ ನ ಸಫ್ವಾನ್, ಬೆಂಗ್ರೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಲೀಂ, ರಫೀಕ್, ಶಿಯಾಬ್ ಮುಂತಾದವರು ಅವರೊಂದಿಗಿದ್ದರು.